ನಿನ್ನ ತುಟಿಯಂಚಿನಲಿರುವ ಆ ನಗುವ
ನಿನ್ನ ಕಣ್ತುಂಬ ಕವಿದಿರುವ ಆ ನೋಟವ
ನಿನ್ನ ಕೊಸರುವುಸಿರಿನಲಿರುವ ಆ ಸ್ಪರುಷವ
ನೆನೆದು ನೆನೆದು ನಡೆಸಿರುವೆನ್ನ ಜೀವನವ
**********
ನೀನು ಪಸರಿಸಿದ ಪ್ರೀತಿಯ ಪಿಸುಮಾತುಗಳನು
ಭಾವನೆಗಳಿಂದಲಂಕರಿಸಿ ಮನಸಿನಿಂದಾಲಿಸುವೆನು
ನೀನು ತೋರಿದ ಸರಸವಿರಸಗಳ ಸಾನಿಧ್ಯವನು
ಅರಿತು ಬೆರೆತು ಎದೆಯಾಳದಿಂದ ಆಲಂಗಿಸುವೆನು
**********
ನೀನೇ
ನಮ್ಮ ದನಿಯು ಸ್ವರ ಸಂಗೀತದಲೆಯು
ನೀನೇ
ನಮಗೆ ಬೆಳಕು ಬೆಳಗಲಿರುಳಲೂ ಬದುಕು
ನೀನೇ
ನಮ್ಮ ಉಸಿರು ನಮ್ಮ ಅಸ್ತಿತ್ವದ ಹೆಸರು
ನೀನೇ
ನಮಗೆ ಮೋಕ್ಷವು ಅನಂತಾನಂತಾನಂದವು
.jpg)