Monday, September 11, 2017

ನಮ್ಮವಳು

ನಿನ್ನ ತುಟಿಯಂಚಿನಲಿರುವ ನಗುವ
ನಿನ್ನ ಕಣ್ತುಂಬ ಕವಿದಿರುವ ನೋಟವ
ನಿನ್ನ ಕೊಸರುವುಸಿರಿನಲಿರುವ ಸ್ಪರುಷವ
ನೆನೆದು ನೆನೆದು ನಡೆಸಿರುವೆನ್ನ ಜೀವನವ
**********
ನೀನು ಪಸರಿಸಿದ ಪ್ರೀತಿಯ ಪಿಸುಮಾತುಗಳನು
ಭಾವನೆಗಳಿಂದಲಂಕರಿಸಿ ಮನಸಿನಿಂದಾಲಿಸುವೆನು
ನೀನು ತೋರಿದ ಸರಸವಿರಸಗಳ ಸಾನಿಧ್ಯವನು
ಅರಿತು ಬೆರೆತು ಎದೆಯಾಳದಿಂದ ಆಲಂಗಿಸುವೆನು
**********
ನೀನೇ ನಮ್ಮ ದನಿಯು ಸ್ವರ ಸಂಗೀತದಲೆಯು
ನೀನೇ ನಮಗೆ ಬೆಳಕು ಬೆಳಗಲಿರುಳಲೂ ಬದುಕು
ನೀನೇ ನಮ್ಮ ಉಸಿರು ನಮ್ಮ ಅಸ್ತಿತ್ವದ ಹೆಸರು
ನೀನೇ ನಮಗೆ ಮೋಕ್ಷವು ಅನಂತಾನಂತಾನಂದವು