ಅರುಣನುದಯಿಸಿದ ಆಗಸದಲಿ
ಬೆಳ್ಳಕ್ಕಿಗಳ ಸಾಲು ಸುರಿಯುವ ದೃಶ್ಯವು
ನೀನು
ಜುಳುಜುಳುವ ನದಿಯ ದಡದಲಿ
ಕೇಳಿಬರುವ ಕೋಗಿಲೆಯ ಇಂಚರವು ನೀನು
ಹಸಿರು ಚೆಲ್ಲಿದ ಬನದಲಿ
ಅರಳಿದ ಮಲ್ಲಿಗೆಯ ಪರಿಮಳವು
ನೀನು
ಹರಿವ ತಂಗಾಳಿಯು ಇರುಳಲಿ
ಮೈಮನಕೆ ಕೊಡುವ ಸ್ಪರುಷವು
ನೀನು
ನಿನ್ನ ಕೆಂದಾವರೆಯಂತಹ ಕೆನ್ನೆಯಲಿ
ಮುತ್ತಿನ ಮಳೆಯನೇ ಹರಿಸುವೆನು
ನಿನ್ನ ಮುದ್ದಾದ ಮೊಗದ
ಗಲ್ಲಗುಳಿಯಲಿ
ಸಮರಸದ ಸವಿಜೇನನೇ ತುಂಬುವೆನು
ಆದಿ ಅಂತ್ಯಗಳಾಚೆ ನಮ್ಮ ಮನೆಯಿರಲಿ
ಅದನು ಬೆಳಗುವ ಚೇತನವೇ ನೀನು
ಸರಸವಿರಸಗಳ ನಮ್ಮೀ ಬದುಕಿನಲಿ
ನನ್ನ ಪ್ರೀತಿಯ ಮೂಲವೇ
ನೀನು
.jpg)
No comments:
Post a Comment